ಚಿತ್ರ: ರವಿಚಂದ್ರ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ|ರಾಜ್ ಕುಮಾರ್, ಸುಲೋಚನ

ಹೂಂ ಹೂಂ ಹೂಂ ಹೂಂ ಹೂಂ...

ಇದು ರಾಮಾ ಮಂದಿರಾ
ಹೂಂ.. ಆಮೇಲೆ
ನೀ! ರಾಮಚಂದಿರಾ
ಓ! ಹ ಹ ಹ ಹ..

ಇದು ರಾಮಾ ಮಂದಿರಾ..
ನೀ! ರಾಮಚಂದಿರಾ

ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರಾ.. ಅ ಅ ಆ..
ಓ ಓ
ಇದು ರಾಮ ಮಂದಿರಾ, ನೀ! ರಾಮಚಂದಿರಾ..

ಸ್ವಾಮಿ ನಿನ್ನ ಕಂಗಳಲಿ |೨|
ಚಂದ್ರೋದಯ ಕಾಣುವೆ!

ಸ್ವಾಮಿ ನಿನ್ನ ನಗುವಲೆ ಅರುಣೋದಯ ನೋಡುವೆ
ಸರಸದಲ್ಲೀ ಚತುರ ಚತುರ |೨| 
ನಿನ್ನ ಸ್ನೇಹ ಅಮರಾ!
ನಿನ್ನ ಬಾಳ ಕಮಲದಲಿ ನಾನು ನಲಿವ ಭ್ರಮರ!

ಇದು ರಾಮ ಮಂದಿರಾ, ನೀ! ರಾಮಚಂದಿರಾ..

ನನ್ನ ಸೀತೆ ಇರುವ ತಾಣ |೨|
ಕ್ಷೀರ ಸಾಗರ ದಂತೆ!

ನನ್ನ ಸೀತೆ ಬೆರೆತಾ ಮನವು ಹೊನ್ನ ಹೂವಿನಂತೆ
ನುಡಿವ ಮಾತು ಮಧುರ ಮಧುರ |೨|
ನಿನ್ನ ಪ್ರೇಮ ಅಮರ!

ನೀನು ಹೃದಯ ತುಂಬಿರಲೂ ಬಾಳು ಪ್ರೇಮ ಮಂದಿರಾ

ಇದು ರಾಮ ಮಂದಿರಾ... ಆನಂದ ಸಾಗರ |೨|
ಜೊತೆಯಾಗಿ ನೀನಿರಲು ಬಾಳು ಸಹಜ ಸುಂದರಾ.. ಅ ಅ ಆ.. 
ಓ ಓ

ಇದು ರಾಮ ಮಂದಿರಾ, ನೀ! ರಾಮಚಂದಿರಾ

ಹೊಂ ಹೊಂ ಹೊಂ ಹೊಂ ಹೊಂ ಹೊಂ...

Category: ಕನ್ನಡ ಚಿತ್ರಸಾಹಿತ್ಯ
Category: ರವಿಚಂದ್ರ ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
Category:Kannadaವರ್ಗ:ಡಾ.ರಾಜ್‍ಕುಮಾರ್ ಗಾಯನ